ಶ್ರೀಗುರುಭ್ಯೋ ನಮಃ
**
ಮಾಘ-ಶುದ್ಧ-ಸಪ್ತಮೀ ಅಂದರೆ ರಥಸಪ್ತಮಿಯಂದು ಅಧೋಕ್ಷಜತೀರ್ಥರಂತೆ ಆಚಾರ್ಯರ ಮತ್ತೊರ್ವ ಶಿಷ್ಯರಾದ ಶ್ರೀಹೃಷೀಕೇಶತೀರ್ಥರ ಆರಾಧನೆಯ ಪರ್ವಕಾಲವೂ ಹೌದು. ಹಾಗಾಗಿ ಹೃಷೀಕೇಶತೀರ್ಥರು ನಿತ್ಯಸ್ಮರಣೀಯರಾದರೂ ವಿಶೇಷವಾಗಿ ಇಂದು ಸ್ಮರಿಸೋಣ.
ಹೃಷೀಕೇಶತೀರ್ಥರ ಪುರ್ವಾಶ್ರಮದ ಚರಿತ್ರೆಗಳು ಲಭ್ಯವಿಲ್ಲ. ಆಶ್ರಮಾನಂತರದಲ್ಲಿಯೂ ಹೆಚ್ಚಿನ ಮಾಹಿತಿಯು ಸಿಗುವುದಿಲ್ಲ. ಆದರೆ ನಾರಾಯಣಪಂಡಿತಾಚಾರ್ಯರು ಒಂದೆರೆಡು ಮಹತ್ವದ ವಿಷಯಗಳನ್ನು ದಾಖಲಿಸಿದ್ದಾರೆ.
ಕೇರಳದ ವಿಷ್ಣುಮಂಗಲದ ಸಭೆಯಲ್ಲಿ ಶ್ರೀಮದಾಚಾರ್ಯರು ಭಾಗವತಚರಿತ್ರೆಯನ್ನು ಹೇಳುವಾಗ ಶ್ರೀಮದಾಚಾರ್ಯರಿಗೆ ಅನುಗುಣವಾಗಿ ಭಾಗವತದ ಶ್ಲೋಕಗಳನ್ನು ಉತ್ತಮ ಕಂಠದಿಂದ ರಾಗದಿಂದ ಭಾವಪೂರ್ಣವಾಗಿ ಹೃಷೀಕೇಶತೀರ್ಥರು ಹಾಡುತ್ತಿದ್ದರು.
*अवदत्स कथां रथाङ्गपाणेर्भगवान्भागवते भवापहन्त्रीम्।*
*अनुरूपगुणस्वरादिभाजा निजशिष्यप्रवरेण वाच्यमाने।।*ಇಲ್ಲಿ ನಾರಾಯಣಪಂಡಿತಾಚಾರ್ಯರು ಹೇಳಿರುವ *ಅನುರೂಪಗುಣಸ್ವರಾದಿಭಾಜಾ* ಎಂಬ ವಿಶೇಷಣವು ಬಹಳ ಗಂಭೀರವಾದದ್ದು. ಇದನ್ನು ಅರ್ಥೈಸಿಕೊಳ್ಳಲು ವೈದಿಕೋಚ್ಚಾರಣಪ್ರಕ್ರಿಯೆಯ ಆಳವಾದ ಜ್ಞಾನ, ಹಾಗೂ ಸಂಗೀತದ ಜ್ಞಾನವಿರಬೇಕು.
ಶ್ರೀಮದಾಚಾರ್ಯರ ರಾಗ-ಭಾವ-ಧ್ವನಿಗಳಿಗೆ ಸದೃಶವಾದ ರಾಗ-ಭಾವ-ಧ್ವನಿಗಳು ಹೃಷೀಕೇಶತೀರ್ಥರಿಗೆ ಇದ್ದವು ಎಂದರೆ ಅವರ ಧ್ವನಿ ಅವರ ಉಚ್ಚಾರಣೆ ಅವರ ಭಾವ ಹೇಗಿರಬಹುದು? ದೇವಾನಂದಕರವಾದ ಗುಣಗಳಿವು.
ಪಂಡಿತಾಚಾರ್ಯರ ಮತ್ತೊಂದು ಮಾತು *ನಿಜಶಿಷ್ಯಪ್ರವರೇಣ* ಇದರ ವಿವರಣೆಯನ್ನು ತಾವೇ ವ್ಯಾಖ್ಯಾನದಲ್ಲಿ ಕೊಟ್ಟಿದ್ದಾರೆ *ಶ್ರೀಹೃಷೀಕೇಶತೀರ್ಥೇನ* ಎಂದು.
ಇದು ಹೊಗಳಿಕೆಯ ಮಾತಲ್ಲ. ಹೃಷೀಕೇಶತೀರ್ಥರಲ್ಲಿದ್ದ ಮಹತಿಯಿದು. ಪದ್ಮನಾಭತೀರ್ಥರಿಗೆ *ವೇದಪ್ರವಚನಾಚಾರ್ಯಶಿಷ್ಯ* ಎಂಬಂತೆ ಇದು ಅವರ ಬಿರುದು ಕೂಡ. ಇದೇ ಮಾತೆ *ಅಷ್ಟೋತ್ಕೃಷ್ಟ* ಎಂಬ ರೂಪವನ್ನು ಪಡೆದು ಹೃಷೀಕೇಶತೀರ್ಥರ ಪರಂಪರೆಯಾದ ಪಲಿಮಾರುಮಠಕ್ಕೆ ಅಥವಾ ಅಲ್ಲಿಯ ಪೀಠಾಧಿಪತಿಗಳಿಗೆ ವಿಶೇಷಣವಾಗಿ ಹೇಳುವ ಕ್ರಮ ಬಂದಿದೆ. ಅಷ್ಟೋತ್ಕೃಷ್ಟಪಲಿಮಾರುಮಠ ಇತ್ಯಾದಿ.
ಇದು ಕೇವಲ ಸಾಹಿತ್ಯ-ಸಂಪ್ರದಾಯಗಳನ್ನಾಧಾರಿಸಿದ ವಿಷಯವಲ್ಲ. ಶಾಸನದಲ್ಲೂ ದಾಖಲಾದ ವಿಷಯ. ವಿಜಯನಗರದ ರಾಜನಾದ ಹರಿಹರರಾಯನು ಉಡುಪಿಕೃಷ್ಣಮಠಕ್ಕೆ ನೀಡಿದ ದಾನವನ್ನು ಉಲ್ಲೇಖಿಸುವ ಶಾಸನದಲ್ಲಿ ಪಲಿಮಾರು ಮಠದ ವಿದ್ಯಾಮೂರ್ತಿತೀರ್ಥರಿಗೆ *ಪ್ರಥಮೋತ್ಕರ್ಷೆಯ* ಎಂಬ ವಿಶೇಷಣವನ್ನು ನೀಡಿ ಗೌರವಿಸಲಾಗಿದೆ. ಇದು ಹೃಷೀಕೇಶತೀರ್ಥರ ಮತ್ತೊಂದು ವೈಶಿಷ್ಟ್ಯ.
YOU ARE READING
ದಾಸ ಸಾಹಿತ್ಯ
Poezja*|ಏನು ಪೇಳಲಿ ಗೋಪಿ ನಿನ್ನ ಮಗನ ಜಾಲ|* *✍ಪ್ರಹ್ಲಾದರಾಯರು ಕಯಾದುವಿನ ಗರ್ಭದಲ್ಲಿ ಇದ್ದಾಗ,ದೇವರ್ಷಿ ನಾರದರಿಂದ ಭಗವತ್ ತತ್ವಗಳನ್ನು ತಿಳಿಯುವ ಯೋಗ ಪಡೆದರು..ಅಂದರೆ ಶ್ರವಣದ ಭಾಗ್ಯ ಆ ಶಿಶುವಿಗೆಬಂತು..* *ಮಹಾಭಾರತದ ಯುದ್ಧ ಮುಗಿದಾಗ ಶರಪಂಜರದಲ್ಲಿ ಮಲಗಿದ್ದ ಭೀಷ್ಮರು ಧರ್ಮರಾಜನಿಗೆ ಧರ್ಮದ ಮರ್ಮವನ್ನು ತಿಳ...