"💐 *ಹೆಳವನಕಟ್ಟೆ ಗಿರಿಯಮ್ಮನವರು* "💐
(25.07.2020 ನಾಗಪಂಚಮೀ " ಸಾಧ್ವೀ ಹೆಳವನಕಟ್ಟೆ ಗಿರಿಯಮ್ಮನವರ ಆರಾಧನಾ ಮಹೋತ್ಸವ )
*ಕರ್ನಾಟಕದ " ಮೀರಾ " ಎಂದು ಹೆಸರಾದ ಸಾಧ್ವೀ ಹೆಳವನಕಟ್ಟೆ ಗಿರಿಯಮ್ಮನವರು ಹರಿಭಕ್ತಿಯ ಸಾಕಾರ ರೂಪವೇ ಆಗಿರುವರೆಂದು ವಿಮರ್ಶಕರು ಬಣ್ಣಿಸಿರುವರು.**ಹೇಳವನಕಟ್ಟೆ ಗಿರಿಯಮ್ಮನವರಗೆ ಅನುಗ್ರಹಿಸಿದ ಶ್ರೀ ಸುಮತೀಂದ್ರರು* ..*
ಒಮ್ಮೆ *ಶ್ರೀ ಸುಮತೀಂದ್ರ ತೀರ್ಥರು ಮಲೇಬೆನ್ನೂರುಗೆ(ಆಗ ಧಾರವಾಡ ಜಿಲ್ಲೆ) ಆಗಮಿಸಿರುತ್ತಾರೆ,ಆಗಿನ ಸಂಪ್ರದಾಯಸ್ಥರು,ಗಿರಿಯಮ್ಮನನ್ನು ಬಂಜೆಯೆಂದು ಪರಿಗಣಿಸಿ,ಸ್ವಾಮಿಗಳೆದರು ಬರದಂತೆ ನಿರ್ಬಂಧ ಹಾಕಿದಾಗ ಅಪರೋಕ್ಷ ಜ್ಞಾನಿಗಳಾದ ಶ್ರೀ ಸುಮತೀಂದ್ರತೀರ್ಥರು ಗಿರಿಯಮ್ಮನನ್ನು ಕರೆಸಿ,ತೀರ್ಥ ನೀಡಿದರಂತೆ.ತೀರ್ಥ ಕೊಡುವಾಗ* *,"ಯಾರು ಈಕೆಯನ್ನು ಬಂಜೆಯೆಂದು ಕರೆದದ್ದು?,ಇವರು ಬಾಲಕೃಷ್ಣನನ್ನು ಆಡಿಸಿದ ಯಶೋದೆಯ ಕೈ"..* ಎಂದು ಅನುಗ್ರಹಿಸಿದರಂತೆ..
ಅಂದಿನಿಂದ ಅವರನ್ನು *ಯಶೋದಾದೇವಿಯ* *ಅಂಶಾವತರವೆಂದು* ಪ್ರತೀತಿ ಬಂದಿದೆ.ಆ ನಂತರದಲ್ಲಿ ಗಿರಿಯಮನನ್ನು ವಿಶೇಷವಾಗಿ ಅನುಗ್ರಹಿಸಿದರು.*ವಿಜಯದಾಸರ ಶಿಷ್ಯರು ಆದ ,ಭಕ್ತಿಯಲ್ಲಿ ಭಾಗಣ್ಣ ಎಂದೆ ಖ್ಯಾತರಾದ,ಅಪರೋಕ್ಷ ಜ್ಞಾನಿ ಗಳಾದ ಶ್ರೀ ಗೋಪಾಲದಾಸರು ಉಡುಪಿ ಯಾತ್ರಾಗೆ ಹೋಗುವಾಗ ಮಲೇಬೆನ್ನುರಿಗೆ ಆಗಮಿಸಿ ಗಿರಿಯಮ್ಮನವರಿಗೆ ಶ್ರೀ ಬಾಲ ಮೂರ್ತಿಯನ್ನು ಹಾಗೂ ಅಂಕಿತವನ್ನು ನೀಡಿದರಂತೆ,ಆ ನಂತರ ಆಕೆಗೆ *"ಹೇಳವನಕಟ್ಟೆ ರಂಗ"* ಎನ್ನುವ ಅಂಕಿತದಲ್ಲಿ ಅನೇಕ ಕೃತಿಗಳನ್ನು ರಚಿಸಿದ್ದಾರೆ* ...
*ಕೊಮಾರನ ಹಳ್ಳಿಯ ಲಕ್ಷ್ಮೀ ರಂಗನಾಥ ಸ್ವಾಮಿಯ ರಥೋತ್ಸವದ ಸಂದರ್ಭದಲ್ಲಿ ಉತ್ಸವ ಮೂರ್ತಿಯ ಆಭರಣವೊಂದನ್ನು ಗುಬ್ಬಚ್ಚಿಯೊಂದು ಹಾರಿಸಿಕೊಂಡು ಹೋದಾಗ ಹೊನ್ನು ತಾ ಗುಬ್ಬಿ ಹೊನ್ನು ತಾ ಎಂದು ಭಕ್ತಿಯಿಂದ ಗಿರಿಯಮ್ಮ ಹಾಡಿದ್ದಕ್ಕೆ ಗುಬ್ಬಿ ಹಾರವನ್ನು ಮರಳಿ ಅದೇ ಸ್ಥಾನಕ್ಕೆ ತಂದು ಇಟ್ಟಿತಂತೆ.*
*ಊರಿನಲ್ಲಿ ಕ್ಷಾಮ ತಲೆದೋರಿದ ಸಮಯದಲ್ಲಿ ದಯೆ ಮಾಡೊ ರಂಗ ನಿನ್ನ ಕರುಣೆ ಉಳಿಯದಿ ಲೋಕ ಎಂಬ ಕಿರ್ತನೆಯನ್ನು ಹಾಡಿದಳು ಎಂಬ ಐತಿಹ್ಯ ಪ್ರಚಲಿತದಲ್ಲಿದೆ.*
" *ರಾಜಕುಮಾರನ ಮೇಲೆ ಗಿರಿಯಮ್ಮ ಕೃಪಾ ದೃಷ್ಟಿ* ".
*ಪುಂಗನೂರಿನ ರಾಜಕುಮಾರನಿಗೆ ಎಳೆಯ ವಯಸ್ಸಿನಲ್ಲಿಯೇ ಕಣ್ಣು ಹೋಗಿ ಗೋಳಾಡುತ್ತಿದ್ದನು. ಸಾಧ್ವೀ ಗಿರಿಯಮ್ಮನವರ ಮಹಿಮೆಯನ್ನು ತಿಳಿದ ಪುಂಗನೂರಿನ ರಾಜನು ಅವರನ್ನು ತನ್ನ ಮಗನಿಗೆ ದೃಷ್ಟಿ ಬರುವಂತೆ ಅನುಗ್ರಹ ಮಾಡಮ್ಮಾ ಎಂದು ಪ್ರಾರ್ಥಿಸಿ ಕೊಂಡಾಗ, ಸಾಧ್ವೀ ಗಿರಿಯಮ್ಮನವರು ತಾವು ದೇವರಿಗೆ ಹಚ್ಚುವ ದೀಪದ ಕಾಡಿಗೆಯನ್ನು ಲೇಪಿಸಿ ಆ ರಾಜಕುಮಾರನಿಗೆ ಕಣ್ಣು ಬರುವಂತೆ ಮಾಡಿದರು.*
*ಇಂಥಹಾ ಸಾಧ್ವೀ ಹೆಳವನಕಟ್ಟೆ ಗಿರಿಯಮ್ಮನವರು ದಾಸ ಸಾಹಿತ್ಯ ಕ್ಷೇತ್ರಕ್ಕೆ ಅತ್ಯದ್ಭುತವಾದ ಸೇವೆ ಸಲ್ಲಿಸಿ ಶ್ರಾವಣ ಶುದ್ಧ ಪಂಚಮೀ ( ನಾಗ ಪಂಚಮೀ ) ಕೋಮಾರನಹಳ್ಳಿ ತುಂಗಭದ್ರೆಯಲ್ಲಿ ಲೀನವಾಗಿ ಶ್ರೀ ರಂಗನಾಥನ ಧಾಮವನ್ನು ಸೇರಿದರು!*
ಪತಿವ್ರತೆಯರ ವ್ರತವ ಅಳಿದಂಥ ಕೈಗೆ
ಹಿತವಾಜಿಯನೇರಿ ಮರ್ದಿಸಿದ ಕೈಗೆ
ಪತಿ ಶಿರೋಮಣಿ ಲಕ್ಷ್ಮೀ ಕಾಂತನ ಕೈಗೆ
ಚತುರ ಹೆಳವನ ಕಟ್ಟೆ ರಂಗನ ಕೈಗೆ... ತಾ ಗುಬ್ಬಿ.. ತಾ ಗುಬ್ಬಿ...ಹೊನ್ನು ತಾ ಗುಬ್ಬಿ ಹೊನ್ನು ತಾ
ಚಿನ್ಮಯ ಮೂರುತಿ ಚೆಲುವ ರಂಗನ ಕೈಗೆ
ಹೊನ್ನು ತಾ ಗುಬ್ಬಿ ಹೊನ್ನು ತಾ.....ಹೇಳವನಕಟ್ಟಿ ರಂಗನಾಥ ಸ್ವಾಮಿ..👇👇
ಆ ಹೇಳವನಕಟ್ಟಿ ಶ್ರೀ ರಂಗನಾಥ ಸ್ವಾಮಿ ಎಲ್ಲರಿಗೂ ಅನುಗ್ರಹಿಸಲಿ...
🙏🏼🙏🏼ಶ್ರೀ ಕೃಷ್ಣಾರ್ಪಣಮಸ್ತು🙏🏼🙏🏼
💐🙏🏼ಎಸ್.ವಿಜಯ ವಿಠ್ಠಲ🙏🏼💐
YOU ARE READING
ದಾಸ ಸಾಹಿತ್ಯ
Thơ ca*|ಏನು ಪೇಳಲಿ ಗೋಪಿ ನಿನ್ನ ಮಗನ ಜಾಲ|* *✍ಪ್ರಹ್ಲಾದರಾಯರು ಕಯಾದುವಿನ ಗರ್ಭದಲ್ಲಿ ಇದ್ದಾಗ,ದೇವರ್ಷಿ ನಾರದರಿಂದ ಭಗವತ್ ತತ್ವಗಳನ್ನು ತಿಳಿಯುವ ಯೋಗ ಪಡೆದರು..ಅಂದರೆ ಶ್ರವಣದ ಭಾಗ್ಯ ಆ ಶಿಶುವಿಗೆಬಂತು..* *ಮಹಾಭಾರತದ ಯುದ್ಧ ಮುಗಿದಾಗ ಶರಪಂಜರದಲ್ಲಿ ಮಲಗಿದ್ದ ಭೀಷ್ಮರು ಧರ್ಮರಾಜನಿಗೆ ಧರ್ಮದ ಮರ್ಮವನ್ನು ತಿಳ...