ಶ್ರೀ *ಕಂಬಾಲೂರು ರಾಮಚಂದ್ರತೀರ್ಥ

2 0 0
                                    

**ಶ್ರೀಂ ಶ್ರೀ ಕಂ ಕಪಿಲಾಯ ನಮಃ*

    *ಮಾರ್ಗಶಿರ ಶುಕ್ಲ ಪಂಚಮಿ*

*ವಂದಾರು ಕಲ್ವತರವೇ ವಾದಿ ಕೈರವ ಭಾನವೇ/*
*ಶ್ರೀರಾಮಚಂದ್ರಗುರವೇ ನಮಃ ಕಾರುಣ್ಯಸಿಂಧವೇ//*

*ಶಬ್ದೇ ತರ್ಕೇ ಚ ವೇದಾಂತೇ ಭಾಟ್ಟೇ ಪ್ರಾಭಾಕರೇ ತಥಾ| ರಾಮಚಂದ್ರಗುರೋಸ್ತುಲ್ಯಃ ಕೋ ನು ವಾ ವರ್ತತೇ ಭುವಿ* ( ಶ್ರೀ ಲಕ್ಷ್ಮೀನಾಥ ತೀರ್ಥರು- ತರ್ಕತಂಡವ ವ್ಯಾಖ್ಯಾನ)

*ಇತಿ ಶ್ರೀಮತ್ಪರಮಹಂಸ ಪರಿವ್ರಾಜಕಾರ್ಯಾಣಾಂ ಯತಿಕುಲತಿಲಯತಿರಾಜರಾಜಯತಿ ಸಾರ್ವಭೌಮಾನಾಂ ಶ್ರೀವ್ಯಾಸತೀರ್ಥಪೂಜ್ಯಪಾದಾನಾಂ ಪರಮಾನುಗ್ರಹಹೇಣ ಸರ್ವಾವನಿಪತಿಸಭಾಸು ವಿಷ್ಣೋಃ ಸರ್ವೋತ್ತಮತ್ವಸ್ಥಾಪನೇನ ದಿಗಂತಕೀರ್ತಿಸಂಪನ್ನಾನಾಂ ಶ್ರೀರಾಮಚಂದ್ರಪೂಜ್ಯಪಾದಾನಾಂ ದಯಯಾ..* (ಶ್ರೀಲಕ್ಷ್ಮೀನಾಥ ಕೃತ ತಾತ್ಪರ್ಯಚಂದ್ರಿಕಾಸುಬೋಧಿನೀ)

*ಸಾದ್ವಿಮಾನಂ ಸುಧಾಯಾ ಯಃ ಸಮ್ಯಜ್ಙ್ಞಾಪಿತವಾನ್ ಭುವಿ| ರಾಮಚಂದ್ರ ಗುರುಂ ನೌಮಿ ವಿದ್ವನ್ಮುಕುಟಮಂಡನಮ್* (ಶ್ರೀಕುಂಡಲಗಿರಿ ಆಚಾರ್ಯರು- ನ್ಯಾಯಸುಧಾಟಿಪ್ಪಣೀ)

*ಪೂರ್ಣಬೋಧಗುರೂನ್ ವಂದೇ ಜಯಾರ್ಯಾನ್ ವ್ಯಾಸದೇಶಿಕಾನ್|ರಾಮಚಂದ್ರಗುರೂನಾರ್ಯಾನ್ ಲಕ್ಷ್ಮೀನಾಥಗುರೂನಪಿ* ( ಶ್ರೀಜಗನ್ನಾಥತೀರ್ಥಕೃತ ಭಾಷ್ಯದೀಪಿಕಾ)

ಹೀಗೆ ಅನೇಕ ಜ್ಞಾನಿ ವರೇಣ್ಯರಿಂದ ಸ್ತುತಿಸಲ್ಪಟ್ಟ ಮಹಾತಪಸ್ವಿಗಳು ಶ್ರೀಕಂಬಾಲೂರು ರಾಮಚಂದ್ರ ತೀರ್ಥರು. ಶ್ರೀವ್ಯಾಸರಾಜರ ಅನಂತರ ಐದನೆಯವರಾಗಿ ಪೀಠವನ್ನಾಳಿದ ಶ್ರೀಗಳವರಲ್ಲಿ ಸರ್ವತಂತ್ರ ಸ್ವತಂತ್ರ ಎಂಬ ಬಿರುದು ಅರ್ಥವತ್ತಾಗಿತ್ತು.
ಅವರು ಸಂಚರಿಸುವಾಗ *ದ್ವೈತ ಸಿದ್ಧಾಂತದ ವಿರೋಧಿಗಳಾದ ದುರ್ವಾದಿಗಳೆಲ್ಲರೂ‌ ಶ್ರೀಗಳವರ ಕಾಲ್ಕೆಳಗೆ ಸಿಕ್ಕಿ ನರಳುತ್ತಿರುವರು;ಯಾರು ಬೇಕಾದರೂ ಬಂದು ವಾದದಲ್ಲಿ ಜಯಿಸಿ ಬಿಡಿಸಿಕೊಳ್ಳಬಹುದು* ಎಂಬುದಾಗಿ ಅವರ ಭೃತ್ಯರು ಸಾರುತ್ತಿದ್ದರೆಂದಮೇಲೆ ಅವರಿಗಿದ್ದ ಆಳವಾದ ಜ್ಞಾನ, ವಿದ್ವತ್ತು ಮತ್ತು ವಾದಕೌಶಲತೆ ಎಷ್ಟಿರಬೇಡ!!
ಗ್ರಂಥರಚನೆಯಲ್ಲೂ ಮಹಾದ್ಭುತ ಸಾಮರ್ಥ್ಯವನ್ನು ಹೊಂದಿದ ಶ್ರೀಗಳವರು ಶ್ರೀಮನ್ಯಾಯಸುಧಾ ವ್ಯಾಖ್ಯಾನದಲ್ಲಿ , ಇತರ ವ್ಯಾಖ್ಯಾನಗಳಲ್ಲಿ ಸ್ಪಷ್ಟವಾಗಿ‌  ವಿವರಿಸದಿರುವ‌ ವಿಷಯಗಳನ್ನು ಹೇರಳವಾಗಿ ತಮ್ಮ ವ್ಯಾಖ್ಯಾನದಲ್ಲಿ ತಿಳಿಸುವುದರ ಜೊತೆಗೆ ತಮ್ಮದೇ ಒಂದು ನೂತನ ಭಾವವನ್ನು ಮೂಲಗ್ರಂಥದಿಂದ ತೆಗೆದುಕೊಂಡು ಅನೇಕ ಆಕ್ಷೇಪಗಳನ್ನು ಪರಿಹರಿಸಿ ನ್ಯಾಯಸುಧಾ ಗ್ರಂಥದ ಗಾಂಭೀರ್ಯತೆಯನ್ನು ತಿಳಿಸಿದ್ದಾರೆ.

ದಾಸ ಸಾಹಿತ್ಯWhere stories live. Discover now