ಶ್ರೀ ದೇವೇಂದ್ರ ತೀರ್ಥರ *

1 0 0
                                    

*ಶ್ರೀ

ಶ್ರೀ ದೇವೇಂದ್ರ ತೀರ್ಥರು ಸದಾ ಭಾಗವತ ಅಧ್ಯಯನ, ಶ್ರವಣ, ಪಾಠಗಳಲ್ಲಿ ಆಸಕ್ತರಾದವರು, ಇವರು ತಮ್ಮ ಜೀವನದಲ್ಲಿ ಎರಡೇ ಸಲ ಭಿಕ್ಷೆಯನ್ನು ಮಾಡಿದವರು. ಸಾಧಕನಾದವನು ಯಾವ ರೀತಿಯಲ್ಲಿ ಜೀವನವನ್ನು ನಡೆಸಿಕೊಂಡು ಹೋಗಬೇಕು ಎನ್ನುವುದನ್ನು ಸದಾ ಶಿಷ್ಯರಿಗೆ, ಸಜ್ಜನರಿಗೆ ತಿಳಿಸಿ ಹೇಳುತ್ತಿದ್ದರು. ಆ ವಾಕ್ಯಗಳ ಸಂಗ್ರಹ ರೂಪದ ಪುಸ್ತಕ ಸಹ ಬಿಡುಗಡೆ ಆಗಿದೆ. ಆ ಪುಸ್ತಕಕ್ಕೆ ದೇವೇಂದ್ರ ತೀರ್ಥರ ನುಡಿಮುತ್ತುಗಳು ಅಂತಲೇ ಹೆಸರು. ಅದರಿಂದ ಒಂದು ನುಡಿಮುತ್ತನ್ನು ನೋಡೋಣ..

*ಶುದ್ಧಿಯೆಂದರೆ ಕೇವಲ ಮೃಜ್ಜಲಗಳಿಂದ ಸಾಧ್ಯವಾದದ್ದಲ್ಲ* *_ಅಭಿಮಾನ ತ್ಯಾಗವೇ ಸುಸ್ನಾನ_* ಎಂಬಂತೆ ನಾನು ನನ್ನದು, ಎಲ್ಲವೂ ನಾನೇ ಮಾಡಿದ್ದು, ನನ್ನಿಂದಲೆ ಎಲ್ಲರೂ, ಮತ್ತೆ ಎಲ್ಲರ ಜೀವನ ಎನ್ನುವ ಎಲ್ಲ ವಿಷಯಾಸಕ್ತ ವಿಷಯಗಳು ತ್ಯಾಗಮಾಡಿ ನಾ ಹಮ್ ಕರ್ತಾ ಹರಿಃ ಕರ್ತಾ ಎನ್ನುವುದನ್ನು ಪರಿಪೂರ್ಣವಾದ ಭಕ್ತಿಯಿಂದ ಅಲವಡಿಸಿಕೊಂಡರೆ ಮಾತ್ರವೇ ಅದು *ಆತ್ಮ ಶುದ್ಧಿ* ಎನಿಸಿಕೊಳ್ಳುತ್ತದೆ ಹೊರತು, ಮೇಲೆ ಮೃತ್ತಿಕೆಯನ್ನು ಹಚ್ಚಿಕೊಂಡರೆ, ಸ್ನಾನ ಮಾಡಿ ತೀರ್ಥದಲ್ಲಿ ಮುಳುಗಿದರೂ ಶುದ್ಧರಾಗುವುದಿಲ್ಲ ಅಂತಾರೆ ಶ್ರೀ ಗುರುಗಳು..

ಇದೇ ವಿಷಯವನ್ನು ಶ್ರೀಮತ್ಪುರಂದರದಾಸಾರ್ಯರು ಸಹ ತಮ್ಮ ಉಗಾಭೋಗದಲ್ಲಿ *ಮಿಂದಲ್ಲಿ ಫಲವೇನು ಮೀನು ಮೊಸಳೆಯಂತೆ* ಅಂತಾರಲ್ಲವೇ? ಮೀನು, ಮೊಸಳೆ ಗಂಗೆಯಲ್ಲೇ ಸದಾ ಮುಳುಗಿದ್ದರೂ ಆ ಗಂಗೆಯ ಪಾವಿತ್ರ್ಯತೆಯನ್ನು ಹೇಗೆ ತಿಳಿಯುವುದಿಲ್ಲವೋ ಹಾಗೆ ಶಾಸ್ತ್ರ ಜ್ಞಾನ ಇತ್ಯಾದಿಗಳಿಂದ ಜ್ಞಾನಿಯಾದವರೂ ಸಹ ಅಹಂಕಾರಾದಿಗಳು ಬಿಡದಿದ್ದರೆ ಆತನು ಶುದ್ಧ ವೈಷ್ಣವನಲ್ಲ ಅಂತಾರೆ ಶ್ರೀಮತ್ಪುರಂದರದಾಸಾರ್ಯರು..

ಈ ವಿಷಯವನ್ನು ನಮ್ಮ ದಾಸರೆಲ್ಲರೂ ಅತ್ಯದ್ಭುತವಾಗಿ ತಮ್ಮ ಕೃತಿಗಳಲ್ಲಿ ತಿಳಿಸಿದ್ದಾರೆ.

ವ್ಯಾಸ ಸಾಹಿತ್ಯವನ್ನು ಪ್ರಾಕೃತ
ಭಾಷೆಯಲ್ಲಿ ನೀಡಿದ ಶ್ರೇಷ್ಠ ದಾಸಾರ್ಯರ ಪದಕ್ಕೆರಗಿ, ಇಂದಿನ ಕಥಾನಾಯಕರಾದ ಶ್ರೀ ದೇವೇಂದ್ರ ತೀರ್ಥರು ಶಾಸ್ತ್ರ ವಿಹಿತವಾಗಿ ನೀಡಿದ ವಾಕ್ಯಗಳನ್ನು ಅನುಸಂಧಾನಕ್ಕೆ ತಗೊಂಡು ಜೀವನ ಮಾರ್ಗವನ್ನು ಸುಗಮವನ್ನಾಗಿ ಮಾಡಿಕೊಳ್ಳಲು ಹರಿವಾಯುಗುರುಗಳ ಅನುಗ್ರಹದಿಂದ ಪ್ರಯತ್ನ ಮಾಡೋಣ ಎಂದು ಪ್ರಾರ್ಥನೆ ಮಾಡುತ್ತಾ..

*ಶ್ರೀ ದೇವೇಂದ್ರ ತೀರ್ಥ ಗುರುಭ್ಯೋನಮಃ*

*ನಾದನೀರಾಜನದಿಂ ದಾಸಸುರಭಿ* 🙏🏽

ದಾಸ ಸಾಹಿತ್ಯWhere stories live. Discover now