*ಶ್ರೀ ಲಕ್ಷ್ಮೀದೇವಿ ಸ್ತೋತ್ರ*
* ಕೃತಿ*
*ರಾಗ ಆನಂದಭೈರವಿ ಖಂಡಛಾಪುತಾಳ*
ದಯಮಾಡೆ ದಯಮಾಡೆ ॥ ಪ ॥
ಹಯಮುಖನಿಗೆ ಅತಿ ಪ್ರಿಯ ಕಮಲಾಲಯೆ ॥ ಅ ಪ ॥ಹೊಲಬುಗಾಣೆ ಭವ ಜಲಧಿಯೊಳಗೆ ತ್ವರ ।
ಸಲಹು ನಿನ್ನ ಕರಜಲಜದಿ ಪಿಡಿದು ॥ 1 ॥ನಳಿನ ಭವಾದ್ಯರ ಸಲಹುವಿ ಈಪ್ಸಿತ ।
ಫಲವಿತ್ತು ಕರುಣದಲಿ ಮಹಲಕುಮಿ ॥ 2 ॥ಕ್ಷೋಣಿ ಭಣಗು ನಾನೋರ್ವನು ನಿನ್ನಯ ।
ಧ್ಯಾನವೆ ಪಾಲಿಸು ಮಾಣದೆ ಜವದಿಂ ॥ 3 ॥ಶರಣು ಪೊಕ್ಕವರ ಜರಿದರೆ ನಿನ್ನಯ ।
ಬಿರುದಿಗೆ ಬಾಹದೆ ಕೊರತಿಯು ಜಾನಕಿ ॥ 4 ॥ಜ್ಞಾನಗಮ್ಯ *ಗುರುಪ್ರಾಣೇಶವಿಠಲನ* ।
ಮಾನಿನಿ ಎನ್ನಯ ಹೀನತೆ ಎಣಿಸದೆ ॥ 5 ॥
*ರಾಗ* : *ವರಾಳಿ* *ತಾಳ* : *ಆದಿ*
ನಾಲಿಗಿದ್ಯಾತಕೆ ಲಕುಮಿಲೋಲನ ನೆನಿಯದೆ
ಮೂಲೋಕದೊಡಿಯಾ ಕೇಶವನ ಗುಣ।
ತಿಳಿದು ಸತತ ಸ್ಮರಣೆ ಮಾಡದೆ ॥ಪ॥ಅಜ ಶಿವಾದಿ ದಿವಿಜರಿಂದ
ಭಜಿಸಿಕೊಂಬ ಅಖಿಲಮಹಿಮ
ತ್ರಿಜಗ ಕ್ಷಣಕೆ ಶ್ವೇಚ್ಛೆಯಿಂದ
ಸೃಜಿಪನೆಂದು ಸ್ಮರಣೆ ಮಾಡದೆ ॥೧॥ಮ್ಯಾಲಿನೇಳು ಲೋಕ ಕೆಳಗಿ
ನೇಳು ಲೋಕ ನಮ್ಮ ಹರಿಗೆ
ಸ್ಥೂಲ ರೂಪವೆಂದು ವೇದ
ಪೇಳುವವೆಂದು ಸ್ಮರಣೆ ಮಾಡದೆ ॥೨॥ಉರಗಪರ್ವತದಲಿ ನಿಂದು
ಧರಣಿಯೊಳಗೆ ಭಕುತಜನಕೆ
ಕರದು ಕೊಡುವ *ಪ್ರಾಣೇಶವಿಠಲ*
ವರವುಯಂದು ಸ್ಮರಣೆ ಮಾಡದೇ ॥೩॥*ಶ್ರೀ* *ಪ್ರಾಣೇಶದಾಸರ* *ಸಂವತ್ಸರ* *ಮುಂಡಿಗೆ*
*ರಾಗ* : *ನಾಟ* *ತಾಳ* : *ಖಂಡಛಾಪು*
ಪಾಹಿ ನಾರಾಯಣನೇ ಪಾಹಿ ವಾಸುಕಿಶಯನ।
ಪಾಹಿ ಗರುಡಧ್ವಜನೆ ಪಾಹಿ ಕಮಲಾಕ್ಷ॥ಪ॥ಸಂವತ್ಸರಾಂಬರಧರ ನತಜನಪಾಲ
ಸಂವತ್ಸರ ಹರೇ ಕಾರುಣ್ಯ ನಿಧಿಯೇ
ಸಂವತ್ಸರಕೆ ನಿನ್ನ ಸಮರಾರೊ ತ್ರಿಜಗದಿ
ಸಂವತ್ಸರ ಜಲಜಕೆ ಸಂವತ್ಸರುಪಮಾ ॥೧॥
YOU ARE READING
ದಾಸ ಸಾಹಿತ್ಯ
Poetry*|ಏನು ಪೇಳಲಿ ಗೋಪಿ ನಿನ್ನ ಮಗನ ಜಾಲ|* *✍ಪ್ರಹ್ಲಾದರಾಯರು ಕಯಾದುವಿನ ಗರ್ಭದಲ್ಲಿ ಇದ್ದಾಗ,ದೇವರ್ಷಿ ನಾರದರಿಂದ ಭಗವತ್ ತತ್ವಗಳನ್ನು ತಿಳಿಯುವ ಯೋಗ ಪಡೆದರು..ಅಂದರೆ ಶ್ರವಣದ ಭಾಗ್ಯ ಆ ಶಿಶುವಿಗೆಬಂತು..* *ಮಹಾಭಾರತದ ಯುದ್ಧ ಮುಗಿದಾಗ ಶರಪಂಜರದಲ್ಲಿ ಮಲಗಿದ್ದ ಭೀಷ್ಮರು ಧರ್ಮರಾಜನಿಗೆ ಧರ್ಮದ ಮರ್ಮವನ್ನು ತಿಳ...