🔱🔱🔱🔱🔱🔱🔱🔱🔱
🌹 *ಶ್ರೀ ಜಿತಾಮಿತ್ರತೀರ್ಥರ*🌹
⚜️ *ಆರಾಧನೆ* ⚜️
🌹🌹🌹🌹🌹🌹🌹🌹🌹ಪಾಠ ಹೇಳುತ್ತಿದ್ದಾಗ ಶ್ರೀ ಜಿತಾಮಿತ್ರತೀರ್ಥರು ಒಂದು ಸಲ ಕೃಷ್ಣಾ ಪ್ರವಾಹ ಬರುತ್ತಿದ್ದರೂ ಆ ಸ್ಥಳದಿಂದ ಕದಲಲಿಲ್ಲ.
ಶಿಷ್ಯರುಗಳೆಲ್ಲಾ ಅಲ್ಲಿಂದ ಎದ್ದು ಓಡಿದರು.
ಆ ಮಹಾ ಪ್ರವಾಹ ಆ ನಡುಗಡ್ಡೆಯನ್ನೆಲ್ಲಾ ಮುಳುಗಿಸಿತು.
ಏಳು ದಿನಗಳ ವರೆಗೂ ಪ್ರವಾಹ ಕಡಿಮೆ ಆಗಲಿಲ್ಲ.
ಆ ಪ್ರವಾಹ ಇಳಿಯಿತು. ಶ್ರೀ ಜಿತಾಮಿತ್ರತೀರ್ಥರು ಧ್ಯಾನಾಸಕ್ತರಾಗಿ ಕುಳಿತಿದ್ದರು.
ಅವರ ದೇಹಕ್ಕೆ ನೀರೆ ಸೋಕಿರಲಿಲ್ಲ.
ಇದರಿಂದ ಶಿಷ್ಯರು ಅವಾಕ್ಕಾದರು.
ಮತ್ತೊಮ್ಮೆ ಕೃಷ್ಣಾ ಪ್ರವಾಹ ಬಂದು ಅವರ ಮೇಲೆ ಹರಿಯಿತು.
ಪ್ರವಾಹ ಇಳಿದ ಮೇಲೆ ಶ್ರೀ ಜಿತಾಮಿತ್ರತೀರ್ಥರು ಅಲ್ಲಿ ಕಾಣಲಿಲ್ಲ.
ಭಕ್ತರಿಗೆ ಅವರು ಅದೃಶ್ಯರಾದವೆಂದೂ; ತಾವು ಕುಳಿತು ಕೊಳ್ಳುತ್ತಿದ್ದ ಗೋನದ ವೃಕ್ಷಕ್ಕೆ ಪೂಜೆ ಮಾಡಬೇಕೆಂದೂ; ಬೇರೇ ಬೃಂದಾವನ ಮಾಡುವ ಅಗತ್ಯವಿಲ್ಲವೆಂದೂ ಅಶರೀರವಾಣಿ ಆಯಿತು.
ಅದರಂತೆ ಇಂದಿನ ವರೆಗೂ ಆ ಗೋನದ ವೃಕ್ಷಕ್ಕೆ ಪೂಜೆ ನಡೆಯುತ್ತಿದೆ." ಶ್ರೀ ಸುಶೀಲೇಂದ್ರತೀರ್ಥರಿಗೆ ಶ್ರೀ ಜಿತಾಮಿತ್ರತೀರ್ಥರು ಮೂಲ ರೂಪದಲ್ಲಿ ದರ್ಶನ "
ಶ್ರೀ ಜಿತಾಮಿತ್ರತೀರ್ಥರು ರುದ್ರಾಂಶರು. ಶ್ರೀ ಸುಶೀಲೇಂದ್ರತೀರ್ಥರು ದಿಗ್ವಿಜಯ ಮಾಡಿಸಿದಾಗ್ಗೆ ಅಲ್ಲಿಯ ಶ್ರೀ ಸಂಗಮೇಶ್ವರ ದೇವಾಲಯದಲ್ಲಿ ಬೈರಾಗಿಯ ರೂಪದಲ್ಲಿ ಶ್ರೀ ಜಿತಾಮಿತ್ರತೀರ್ಥರ ದರ್ಶನವಾಯಿತೆಂದೂ; ಆ ಬೈರಾಗಿ ಈಶ್ವರನ ಗುಡಿ ಹೊಕ್ಕು ಲಿಂಗದಲ್ಲಿ ಅದೃಶ್ಯನಾಗಿದ್ದಾನೆಂದೂ ಹೇಳಿದ್ದು ಇಂತಹಾ ಮಹಾನೀಯರಿಂದ ಮುಖ್ಯ ಮಹಾ ಸಂಸ್ಥಾನದ ಪರಂಪರೆಗೆ ಮೆರಗು ಕೊಟ್ಟಂತಾಯಿತೆಂದರೆ ತಪ್ಪಾಗಲಾರದು." ಶ್ರೀ ಸುಯಮೀ೦ದ್ರತೀರ್ಥರ ಮೇಲೆ ಶ್ರೀ ಜಿತಾಮಿತ್ರರ ಕಾರುಣ್ಯ "
ಕ್ರಿ ಶ 1945ರಲ್ಲಿ ಶ್ರೀ ಸುಯಮೀದ್ರತೀರ್ಥರು ಶ್ರೀ ಜಿತಾಮಿತ್ರತೀರ್ಥರ ಆರಾಧನಾ ಮಹೋತ್ಸವಕ್ಕೆ ದಿಗ್ವಿಜಯ ಮಾಡಿಸಿದ್ದಾರೆ.
ಅದ್ಧೂರಿಯ ಆರಾಧನಾ ಮಹೋತ್ಸವ.
ಶ್ರೀ ಸುಯಮೀ೦ದ್ರತೀರ್ಥರು ತಾವೇ ಸ್ವತಃ ತಮ್ಮ ಅಮೃತ ಹಸ್ತಗಳಿಂದ ಪಂಚಾಮೃತಾಭಿಷೇಕ ಮಾಡಿ - ಅರ್ಚನೆ ನೆರವೇರಿಸಿ ಸಂಸ್ಥಾನ ಪ್ರತಿಮೆಗಳಾದ ಶ್ರೀ ಚತುರ್ಮುಖ ಬ್ರಹ್ಮದೇವರ ಕರಾರ್ಚಿತ ಶ್ರೀ ಮೂಲರಾಮದೇವರ - ಶ್ರೀಮದಾಚಾರ್ಯರ ಕರಾರ್ಚಿತ ದಿಗ್ವಿಜಯ ರಾಮದೇವರ - ಶ್ರೀ ಜಯತೀರ್ಥರ ಶ್ರೀ ಜಯರಾಮ ದೇವರ - ಶ್ರೀ ನೀಲಾದೇವಿ ಕರಾರ್ಚಿತ ಶ್ರೀ ಭೂ ದುರ್ಗಾ ಸಹಿತ ಶ್ರೀ ವೈಕುಂಠ ವಾಸುದೇವರ ಪೂಜೆಯನ್ನು ಅತ್ಯಂತ ವೈಭವದಿಂದ ಹಾಗೂ ನೈವೇದ್ಯ ಮಾಡಿ - ಶ್ರೀ ಜಿತಾಮಿತ್ರ ತೀರ್ಥರಿಗೆ ಹಸ್ತೋದಕ ಸಮರ್ಪಿಸಿ, ಮಹಾ ಮಂಗಳಾರತಿ ಮಾಡಿ ಭಕ್ತಿಯಿಂದ ದೀರ್ಘ ದಂಡ ಪ್ರಣಾಮಗಳು ಮಾಡಿ ಮೇಲೆಕ್ಕೆ ಏಳುವಾಗ ಶ್ರೀ ಜೇತಾಮಿತ್ರ ತೀರ್ಥರಿಗೆ ಅಲಂಕೃತಗೊಂಡ ಹೂವಿನ ದೊಡ್ಡ ಹಾರ ಅವರ ಕುತ್ತಿಗೆಯಲ್ಲಿ ಬಿದ್ದಿದೆ.
ಇದನ್ನು ನೋಡಿ ಶ್ರೀ ಸುಯಮೀ೦ದ್ರತೀರ್ಥರು ಆನಂದ ಬಾಷ್ಪ ಸುರಿಸುತ್ತಾ ಶ್ರೀ ಜಿತಾಮಿತ್ರ ತೀರ್ಥರು ತಮ್ಮ ಮೇಲೆ ತೋರಿದ ಕಾರುಣ್ಯವನ್ನು ನೆನೆದು ಗದ್ಗತರಾದರು.
ಇದನ್ನು ಕಂಡ ಸಜ್ಜನರು ಹರ್ಷಿದ್ಗಾರ ಕೂಗಿದರು.
YOU ARE READING
ದಾಸ ಸಾಹಿತ್ಯ
Poezie*|ಏನು ಪೇಳಲಿ ಗೋಪಿ ನಿನ್ನ ಮಗನ ಜಾಲ|* *✍ಪ್ರಹ್ಲಾದರಾಯರು ಕಯಾದುವಿನ ಗರ್ಭದಲ್ಲಿ ಇದ್ದಾಗ,ದೇವರ್ಷಿ ನಾರದರಿಂದ ಭಗವತ್ ತತ್ವಗಳನ್ನು ತಿಳಿಯುವ ಯೋಗ ಪಡೆದರು..ಅಂದರೆ ಶ್ರವಣದ ಭಾಗ್ಯ ಆ ಶಿಶುವಿಗೆಬಂತು..* *ಮಹಾಭಾರತದ ಯುದ್ಧ ಮುಗಿದಾಗ ಶರಪಂಜರದಲ್ಲಿ ಮಲಗಿದ್ದ ಭೀಷ್ಮರು ಧರ್ಮರಾಜನಿಗೆ ಧರ್ಮದ ಮರ್ಮವನ್ನು ತಿಳ...