ವಿಜಯೀ ಭವ* -
🌺🌺🌺🌺🌺🌺🌺
ಶ್ರೀ ಶ್ರೀ
*ಸತ್ಯ_ವಿಜಯ_ತೀರ್ಥರು*
(ಆರಾಧನಾ ಮಹೋತ್ಸವ ವಿಶೇಷ)
🌺🌺🌺🌺🌺🌺🌺
||ಸತ್ಯಪೂರ್ಣಾಂಬುಧೇರ್ಜಾತೋ ವಿದ್ವಜ್ಜನವಿಜೃಂಭಿತ: |
ಧನೀಧ್ವಂಸೀತು ನಸ್ತಾಪಂ ಶ್ರೀಸತ್ಯವಿಜಯೋಡುಪ: ||ಉತ್ತರಾಧಿ ಮಠದ ಯತಿ ಪರಂಪರೆಯಲ್ಲಿ ಬರುವ "ವಿಜಯೀಭವ" ಎಂದು ಎಲ್ಲರಿಗು ಹರಿಸಿ ಕೇವಲ ಮಂತ್ರಾಕ್ಷತೆಯ ಅನುಗ್ರಹ ಮತ್ತು ಮಹಿಮೆಯನ್ನು ತೋರಿಸಿದ ಗುರುಗಳು, ಮತ್ತು ಅವರ ಹೆಸರಿನಿಂದಲೇ ಇಂದಿಗೂ ಆ ಊರನ್ನು ಗುರುತಿಸುವ ಯತಿ ಶ್ರೇಷ್ಠರಾದ ಶ್ರೀ ಶ್ರೀ ಸತ್ಯವಿಜಯ ತೀರ್ಥರ ಆರಾಧನಾ ಮಹೋತ್ಸವ.
ಪೂರ್ವಾಶ್ರಮ ನಾಮ : ಶ್ರೀ ಪಾಂಡುರಂಗಿ ಬಾಳಚಾರ್ಯರು
ಆಶ್ರಮ ಗುರುಗಳು : ಶ್ರೀ ಸತ್ಯಪೂರ್ಣ ತೀರ್ಥರು
ಆಶ್ರಮ ಶಿಷ್ಯರು : ಶ್ರೀ ಸತ್ಯಪ್ರಿಯ ತೀರ್ಥರು
ಆರಾಧನಾ ದಿನ : ಚೈತ್ರ ಕೃಷ್ಣ ಏಕಾದಶಿ
ವೃಂದಾವನ ಸ್ಥಳ : ಶ್ರೀ ಸತ್ಯವಿಜಯ ನಗರ, ಆರಣಿ ತಮಿಳುನಾಡು.
ವೇದಾಂತ ಸಾಮ್ರಾಜ್ಯ ಕಾಲ : 10 ವರ್ಷ 10 ತಿಂಗಳು 10 ದಿನ
ನದಿತೀರಾ : ಕೌಂಡಿನ್ಯ ನದಿ ಅಥವಾ ಕಮಂಡಲನಾಗನದಿಪಾಂಡುರಂಗಿ ಮನೆತನದ ಶ್ರೀನಿವಾಸ ಚಾರ್ಯರ ಮಕ್ಕಳಾದ ಶ್ರೀ ಪಾಂಡುರಂಗಿ ಬಾಳಾಚಾರ್ಯರು ಪರಮ ಸಾತ್ವಿಕರು, ಶ್ರೀಮನ್ನ್ಯಾಸುಧಾ ಪಂಡಿತರು, ಪದ್ಮನಾಭ ತೀರ್ಥರ ವಂಶದವರು ಆಗಿದ್ದು, ತಮಿಳುನಾಡಿನ ರಾಜಮನ್ನರುಗುಡಿಯಲ್ಲಿ ವಾಸಿಸುತ್ತಿದ್ದರು.
ಒಂದು ಸಂದರ್ಭದಲ್ಲಿ ಶ್ರೀ ಬಾಳಾಚಾರ್ಯರು ಗಡ್ಡವನ್ನು ಬಿಟ್ಟಿದ್ದರು, ಕೆಲವರು ಇವರನ್ನು ತುರ್ಕಿಶರು (ಮುಸಲ್ಮಾನರಂತೆ) ಎಂದು ಇವರನ್ನು ಧೂಷಿಸುತ್ತಿದ್ದರು, ಆದರೆ ಅಂತರಂಗದಲ್ಲಿ ಶ್ರೀ ಬಾಳಚಾರ್ಯರು ದೇಹದ ಅಲಂಕಾರವನ್ನು ಬಿಟ್ಟು ಮನಸ್ಸಿನಲ್ಲಿ ಪರಮಾತ್ಮನನ್ನ ನಿತ್ಯ ಆರಾಧನೆ ಮಾಡುತ್ತಿದ್ದರು. ಇವರ ಮನೆ ಎದುರಿನ ಸ್ತ್ರೀ ಇವರಿಂದ ಒಂದು ದಿನ ತೀರ್ಥವನ್ನು ತೆಗೆದುಕೊಳ್ಳಲಿಲ್ಲ, ಕಾರಣ ಇವರ ರೂಪವನ್ನು ನೋಡಿ ತೀರ್ಥವನ್ನು ತೆಗೆದು ಕೊಳ್ಳಲಿಲ್ಲ. ಅಂದೇ ಅವಳ ಮನೆಯಲ್ಲಿ ಒಂದು ಕಾರ್ಕೋಟಕ ಸರ್ಪ ಪ್ರತ್ಯಕ್ಷವಾಗಿ ನೀನು ಕೂಡಲೇ ಬಾಳಚಾರ್ಯರಲ್ಲಿ ಕ್ಷಮೆಕೇಳಿ ಅವರಿಂದ ಭಗವದ್ ತೀರ್ಥ ತೆಗೆದೆಕೊ ಇಲ್ಲದ್ದಿದರೆ ಕಚ್ಚುವೆ ಎಂದು ಸರ್ಪವೆ ಹೇಳಿತ್ತಂತೆ, ಅಂತ ಭಗವಂತನ ಧ್ಯಾನ ಮಾಡಿದ ಮಹಿಮರು. ಇವರನ್ನು ಬಾಬಾ ಚಾರ್ಯ ಎಂದು ಕರೆಯುತ್ತಿದ್ದರು. ಇವರು ವ್ಯಾಕರಣ, ಮೀಮಾಂಸ, ಯಜ್ನ್ಯಯಾಗಾದಿಗಳ ಋತ್ವಿಜರು ಆಗಿದ್ದರು. ಪ್ರವೃತ್ತಿ ಕರ್ಮದಲ್ಲಿ ನಿಪುಣರು.ಒಮ್ಮೆ ಈ ಬಾಬಾಚಾರ್ಯರನ್ನು ಪರೀಕ್ಷೆ ಮಾಡಲು ಸತ್ಯಪೂರ್ಣ ತೀರ್ಥರೇ ಅಲ್ಲಿಗೆ ಬಂದುರು, ಆ ಸಂದರ್ಭದಲ್ಲಿ ಬಾಳಚಾರ್ಯರೇ ಋತ್ವಿಜರು. ಇನ್ನು ಹೋಮ ಶುರುವಾಗಿರಲಿಲ್ಲ ಕೂಡಲೇ ಸತ್ಯಪೂರ್ಣ ತೀರ್ಥರು ಅಲ್ಲಿದ್ದ ಸಾಮಗ್ರಿಗಳನ್ನೂ ನದಿಯಲ್ಲಿ ಎಸೆಯಲು ಹೇಳಿದರು. ಮರುಮಾತಾಡದೆ ಗುರುಗಳ ಮಾತಿನಂತೆ ಎಲ್ಲವನ್ನು ಎಸೆದು ಬಂದರು. ತಕ್ಷಣ ಶ್ರೀ ಸತ್ಯಪೂರ್ಣ ತೀರ್ಥರು ಇವರಿಗೆ ಅನುಗ್ರಹ ಮಾಡಿ, ಪುನಃ ಹೊಸದಾಗಿ ಎಲ್ಲಾ ದ್ರವ್ಯಗಳನ್ನು ಕೊಟ್ಟು ಅವರಿಂದ ವಿಶೇಷ ಹವನಗಳನ್ನು ಮಾಡಿಸಿದರು.
YOU ARE READING
ದಾಸ ಸಾಹಿತ್ಯ
Puisi*|ಏನು ಪೇಳಲಿ ಗೋಪಿ ನಿನ್ನ ಮಗನ ಜಾಲ|* *✍ಪ್ರಹ್ಲಾದರಾಯರು ಕಯಾದುವಿನ ಗರ್ಭದಲ್ಲಿ ಇದ್ದಾಗ,ದೇವರ್ಷಿ ನಾರದರಿಂದ ಭಗವತ್ ತತ್ವಗಳನ್ನು ತಿಳಿಯುವ ಯೋಗ ಪಡೆದರು..ಅಂದರೆ ಶ್ರವಣದ ಭಾಗ್ಯ ಆ ಶಿಶುವಿಗೆಬಂತು..* *ಮಹಾಭಾರತದ ಯುದ್ಧ ಮುಗಿದಾಗ ಶರಪಂಜರದಲ್ಲಿ ಮಲಗಿದ್ದ ಭೀಷ್ಮರು ಧರ್ಮರಾಜನಿಗೆ ಧರ್ಮದ ಮರ್ಮವನ್ನು ತಿಳ...